Due to the current pandemic situation COVID 19 we are working with reduced staff. Policy related services might take some time, in the interim you can click here for reaching out to us and to know more about COVID-19 related queries, click here

 

Car Insurance

ಕಾರ್ ವಿಮೆ

  • ನಿಮ್ಮ ವಾಹನಕ್ಕೆ ಯಾವುದೇ ರೀತಿಯಲ್ಲಿ ಹಾನಿಯಾಗಿದ್ದರೆ ಪರಿಹಾರ ನೀಡುತ್ತದೆ
  • ಚೋಳಾ ಎಮ್ಎನಸ್ ಪ್ರಕೃತಿ ವಿಕೋಪಗಳಾದ ಪ್ರವಾಹ, ಚಂಡಮಾರುತಗಳು ಮತ್ತು ಭೂಕಂಪಗಳು ಮತ್ತು ಸಾಮಾಜಿಕ ಅಪಾಯಗಳಾದ ಗಲಭೆ, ಪಿಕೆಟಿಂಗ್, ಕಳ್ಳತನ, ಭಯೋತ್ಪಾದನೆ ಮತ್ತು ಆಕಸ್ಮಿಕವಾಗಿ ಸಂಭವಿಸುವ ನಷ್ಟದಿಂದ ನಿಮ್ಮನ್ನು ಕಾರ್ ವಿಮೆ ಪಾಲಿಸಿಯ ಅಡಿಯಲ್ಲಿ ರಕ್ಷಿಸುತ್ತದೆ.
  • ಮೂರನೇ ವ್ಯಕ್ತಿಯ ವೈಯಕ್ತಿಕ ಗಾಯಗಳಿಗೆ ಅನಿಯಮಿತ ಹೊಣೆಗಾರಿಕೆ
  • ಚೋಳಾ MS ಕಾರ್ ವಿಮಾ ಪಾಲಿಸಿಯ ಅಡಿಯಲ್ಲಿ ಯಾವುದೇ ವ್ಯಕ್ತಿಯು ವಾಹನದಲ್ಲಿ ಮರಣ ಹೊಂದಿದರೆ ಅಥವಾ ದೈಹಿಕ ಅಂಗವೈಕಲ್ಯವನ್ನು ಹೊಂದಿದರೆ ಮತ್ತು ನೀವು ಇದಕ್ಕೆ ಪಾವತಿಸಲು ಕಾನೂನುಬದ್ಧವಾಗಿ ಹೊಣೆಗಾರರಾಗುತ್ತೀರಿ ನಂತರ ಈ ಕಾರ್ ವಿಮಾ ಪಾಲಿಸಿಯು ನಿಮಗೆ ಪರಿಹಾರವನ್ನು ನೀಡುತ್ತದೆ.
  • ಮೂರನೇ ವ್ಯಕ್ತಿಯ ಆಸ್ತಿಯ ನಷ್ಟಕ್ಕೆ ಪರಿಹಾರ ನೀಡುವಿಕೆ
  • ನಿಮ್ಮ ವಾಹನವು ಆಕಸ್ಮಿಕವಾಗಿ ನೀವು ಪಾವತಿಸಲು ಕಾನೂನುಬದ್ಧವಾಗಿ ಜವಾಬ್ದಾರರಾಗಿರುವ ಮೂರನೇ ವ್ಯಕ್ತಿಯ ಆಸ್ತಿಯನ್ನು ಹಾನಿಗೊಳಿಸಿದರೆ ಚೋಳಾ ಎಮ್‌ಎಸ್‌ನ ಮೋಟಾರ್ ವಿಮೆಯ ಈ ವಿಭಾಗವು 7,50,000 ವರೆಗೆ ಪರಿಹಾರ ನೀಡುತ್ತದೆ.

ಕಾರ್ ವಿಮೆಯನ್ನು ಆನ್‌ಲೈನ್‌ನಲ್ಲಿ ಖರೀದಿಸುವುದು ಹೇಗೆ?

ನಿಮ್ಮ ಕಾರ್‌ಗಾಗಿ ಆನ್‌ಲೈನ್‌ನಲ್ಲಿ ನೀವು ವಿಮೆಯನ್ನು ಖರೀದಿಸಲು ಬಯಸಿದರೆ, ಚೋಳಾ MS ವೆಬ್‌ಸೈಟ್‌ಗೆ ಹೋಗಿ ಮತ್ತು ಕಾರ್ ವಿಮೆಯ ಆಯ್ಕೆಯನ್ನು ಆಯ್ಕೆಮಾಡಿ. ಮುಂದಿನ ಪುಟದಲ್ಲಿ ನಿಮಗೆ ವಾಹನದ ಕುರಿತು ಮಾಹಿತಿಯನ್ನು ಕೇಳಲಾಗಿರುತ್ತದೆ, ಅದನ್ನು ಭರ್ತಿಮಾಡಿದ ನಂತರ ವೈಯಕ್ತಿಕ ಮಾಹಿತಿಯ ಕುರಿತು ಕೇಳಲಾಗುತ್ತದೆ ನಂತರ ನೀವು ಸಾಕಷ್ಟು ಆವರಿಸುವಿಕೆ ಸೇರ್ಪಡೆಯ ಆಯ್ಕೆಗಳನ್ನು ಹೊಂದಿರುತ್ತೀರಿ ನಿಮಗೆ ಅಗತ್ಯಕ್ಕೆ ತಕ್ಕಂತೆ ಆಯ್ಕೆಯನ್ನು ಆಯ್ಕೆಮಾಡಿ ಮತ್ತು ಅಲ್ಲಿ ಗೋಚರಿಸುವ ಪ್ರೀಮಿಯಂ ಅನ್ನು ಪಾವತಿಸಿ.

ಆನ್‌ಲೈನ್‌ನಲ್ಲಿ ಕಾರ್ ವಿಮೆಯನ್ನು ನವೀಕರಿಸುವುದು ಹೇಗೆ?

ನಾವು ಆನ್‌ಲೈನ್‌ನಲ್ಲಿ ಕಾರ್ ವಿಮಾ ಪಾಲಿಸಿಯನ್ನು ಖರೀದಿಸುವಂತೆಯೇ, ಚೋಳಾ MS ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನಮ್ಮ ಕಾರಿನ ಹಳೆಯ ವಿಮೆಯನ್ನು ನಾವು ನವೀಕರಿಸಬಹುದು. ಈ ರೀತಿಯಾಗಿ, ಕಾರ್ ವಿಮೆಯ ನವೀಕರಣವನ್ನು ಚೋಳಾ MS ವೆಬ್‌ಸೈಟ್‌ನಲ್ಲಿ ಅತ್ಯಂತ ಸರಳವಾದ ರೀತಿಯಲ್ಲಿ ಮಾಡಬಹುದು.

ಕಾರ್ ವಿಮಾ ಪಾಲಿಸಿಯ ಪ್ರಕಾರಗಳು

ಈ ಕೆಳಗೆ ಮೂರು ಪ್ರಕಾರದ ಕಾರ್ ವಿಮೆಯನ್ನು ನೀಡಲಾಗಿದೆ.

ಕಾಂಪ್ರೆಹೆನ್ಸಿವ್ ಕಾರ್ ವಿಮಾ ಪಾಲಿಸಿ

ಕಾಂಪ್ರೆಹೆನ್ಸಿವ್ ಕಾರ್ ವಿಮಾ ಪಾಲಿಸಿಗಳು ನಿಮ್ಮ ಕಾರ್‌ಗೆ ಅತ್ಯಂತ ಸಮಗ್ರವಾದ ಕಾರ್ ಪಾಲಿಸಿಯಾಗಿದ್ದು ಅದು ಮೂರನೇ ವ್ಯಕ್ತಿಯ ಕಾರ್ ವಿಮೆಗಳಲ್ಲಿನ ಎಲ್ಲವನ್ನೂ ಆವರಿಸುತ್ತದೆ ಅಷ್ಟೇ ಅಲ್ಲದೇ ಬೆಂಕಿ, ವಿಧ್ವಂಸಕ ಕೃತ್ಯಗಳು ಅಥವಾ ಮರಗಳು ಅಥವಾ ಆಲಿಕಲ್ಲುಗಳಂತಹ ಬೀಳುವ ವಸ್ತುಗಳಿಂದ ನಿಮ್ಮ ಕಾರ್‌‌ನ ನಷ್ಟವನ್ನು ಆವರಿಸುತ್ತದೆ.

ಮೂರನೇ-ವ್ಯಕ್ತಿಯ ಹೊಣೆಗಾರಿಕೆ ಕಾರ್ ವಿಮೆ ಪಾಲಿಸಿ

ನಿಮ್ಮ ಕಾರ್‌ಗೆ ಅಪಘಾತ ಸಂಭವಿಸಿದರೆ, ಈ ಪಾಲಿಸಿಯು ಯಾವುದೇ ಕಾನೂನು ಹೊಣೆಗಾರಿಕೆಯಿಂದ ನಿಮ್ಮನ್ನು ರಕ್ಷಿಸುತ್ತದೆ. ಭಾರತದ ರಸ್ತೆಗಳಲ್ಲಿ ಸಂಚರಿಸುವ ವಾಹನಗಳಿಗೆ 1988 ರ ಮೋಟಾರು ವಾಹನ ಕಾಯ್ದೆಯ ಅಡಿಯಲ್ಲಿ ಮೂರನೇ ವ್ಯಕ್ತಿಯ ವಿಮೆಯು ಕಡ್ಡಾಯವಾಗಿದೆ. ಮೂರನೇ ವ್ಯಕ್ತಿ ವಿಮೆಯನ್ನು ಹೊಂದಿರದ ಕಾರ್ ಅನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ

ಝೀರೋ ಡೆಪ್ ಕಾರ್ ವಿಮೆ

ಶೂನ್ಯ ಸವಕಳಿ ವೆಚ್ಚ ಕಾರು ವಿಮೆ ಅಥವಾ ಆವರಿಸುವಿಕೆ ನಿಮ್ಮ ಕಾರಿಗೆ ಗರಿಷ್ಠ ಪರಿಹಾರವನ್ನು ಪಡೆಯಲು ಸಹಾಯ ಮಾಡುತ್ತದೆ. ವಾಹನವನ್ನು ಇನ್‌ವಾಯ್ಸ್ ಮೌಲ್ಯದಲ್ಲಿ ವಿಮೆ ಮಾಡಲಾಗುತ್ತದೆ. ಆದ್ದರಿಂದ ಯಾವುದೇ ನಷ್ಟ ಸಂಭವಿಸುವುದಿಲ್ಲ.

 

<
Toggle Widget